skip to main |
skip to sidebar
Posted by
Lakshmi Bharadwaj
at
9:07 AM
ಮಾತು ವಿರಳವಾದರೂ
ಹೃದಯ ಮರೆಯಲಿಲ್ಲ
ಆಸೆ ಯೆದುರುವಾದಿಸಲಿಲ್ಲ
ಅಂದು
ನನ್ನ ನೆನಪಿನ ಛಾಯೆ
ಎಲ್ಲೆಡೆ
ಹರಡಿದಾಗ...
Posted by
Lakshmi Bharadwaj
at
3:42 AM
I
ನಿನ್ನನ್ನು ಜಪಿಸುವುದು
ಏಕಾಂತದ ಉಪಯೋಗ
ನಿನ್ನ ಹಾಡುವುದು
ನನ್ನ ಬಯಕೆ
ನಿನ್ನನ್ನು ಬರೆಯುವುದು
ನನ್ನ ಬೆರಳಿನ ಕೀರ್ತಿ
ನಿನ್ನ ನೆನಪು
ಕನವರಿಕೆ
II
ಅಪರೂಪದ ವಿವರ
ನಮ್ಮ ಬಾಗಿಲಲ್ಲಿ ಹೊಸ ತೋರಣವಂತೆ,
ಹಿತ್ತಲಲ್ಲಿ ಎಳೆ ತಾವರೆಯಂತೆ,
ಹವಳದ ಮಡಿಕೆ ಹೋಳೆಯುತ್ತಿದೆಯಂತೆ
ನಾ ಅರಿಯದಂತೆ
ಮುಸ್ಸಂಜೆಯ ಕಂಚಿನ ಕಿರಣಗಳಂತೆ,
ಅಲೆಯಿತು ಮನ ಹಲವೆಡೆ
ಅವನ ಕಣ್ಣಿಗೆ ಸೂಕ್ತವಾದ ಬಣ್ಣ ಕಪ್ಪು ಬಿಳುಪು ಕೆಂಪು ಹೊಳಪು
ಪ್ರಯತ್ನಕ್ಕೆ ಮೀರಿದ ಕವಿತೆ
ನನ್ನ ಹೃದಯವನ್ನು ಅರಿತೆ ತಿಳಿಯದಂತೆ……
ಮನಸ್ಸೋತೆ
ನಮ್ಮ ಅಲ್ಪ ವಿವರದ ಗುರುತು,
ಕಾಡುತ್ತಿದೆ ಇಂದು ….ಇನಿಯಾ, ನಿನ್ನ ನೆನಪು