ಕುಂದಿಹೊಗುತ್ತಿರುವ ಬೆಳಕು..
ಮರೆಯಾದ ಹುರುಪು
ಮನದಂಗಳದಲ್ಲಿ ಕರಾಳ ಮೌನ
ಮಾತನಾಡೀತೇ? ನಾನರಿಯದ ಅರಿವಿನ,
ಅನಿರೀಕ್ಷಿತ ಅನಾವರಣ.
ಹೆಣೆದಿಹ ಕನಸುಗಳು ಸರಮಾಲೆಯಾಗಿ ನಿಂತಿಹವು,
ಪೋಣಿಸಿದೆ--ಒಂದು, ಮೂರು, ನೂರು, ಹಲವಾರು,
ಕಣ್ಣಲ್ಲಿ ಕಾಪಾಡಿರುವ ಆಕಾಂಕ್ಷೆ,
ನಿರಾಶೆಯ ಸುಳಿಯಲ್ಲಿ ಸುಳ್ಳಾದೀತೆ?
ಆಸೆಯ, ನಿರಾಶೆಯ, ಬಯಕೆಯ, ಅಭಿಲಾಷೆಯ
ಅಘಾದವಾದ
ಧೀರ್ಗ ಸೆಳೆತ,
ಮರೀಚಿಕೆಯಾಗಿಹ ಕನಸುಗಳು ಹೀಗೊಮ್ಮೆ ನುಸುಳಿ, ಸತಾಯಿಸಿ,
ಕೈಜಾರಿ, ದೂರದಿಂದ ನಗೆ ಬೀರುತ್ತಲಿವೆ,
ಕನವರಿಕೆಯಲ್ಲಿ ಕವನಗಳಾಗುತ್ತಾ
ಕನಿಕರ ತೋರದಂತೆ....