ಆರಂಭ

ಮೊದಲ ಹೆಜ್ಜೆಗಳು.....

ಆರಂಭ

ಹೃದಯದಲ್ಲಿ ಹಲವಾರು ಭಾವನೆಗಳು ಸುಳಿದಾಡಿದಾಗ, ಅವುಗಳಿಗೆ ಅರ್ಥಪೂರ್ಣ ರೂಪವನ್ನು ಕೊಡಬೇಕು ಅನ್ನಿಸುತ್ತದೆ. ಹಾಡುಗಾರರು ರಾಗಗಳ ಮೂಲಕ ತಮ್ಮ ಭಾವನೆಗಳಿಗೆ ರೂಪ ನೀಡುತ್ತಾರೆ. ಆದರೆ ನನಗೆ ಇಂಥ ಸಂಧರ್ಭಗಳಲ್ಲಿ ಬರವಣಿಗೆಯೇ ಸೂಕ್ತ ಮಾರ್ಗ ಎಂದು ತೋಚುತ್ತದೆ. ನಮ್ಮ ಭಾವನೆಗಳಿಗೆ, ಮನಸ್ಸಿನಲ್ಲಿ ಅಲೆಮಾರಿಗಳಾಗಿ ತಿರುಗುತ್ತಿರುವ ಯೂಚನೆಗಳು, ಆಶೆಗಳು, ಅನಿಸಿಕೆಗಳಿಗೆ ಅಕ್ಷರ ರೂಪವನ್ನು ಕೊಡುವುದು ಕಷ್ಟಕರವಾದ ಕೆಲಸ. ನಿರಂತರವಾಗಿ ನನ್ನೊಂದಿಗೆ ನನ್ನ ಭಾವನೆಗಳು ಆಟವಾಡುತ್ತವೆ. ನಾನು ಬೆಳೆದಿರುವುದೇ ಈ ಆಟವನ್ನಾಡುತ್ತ. ಆದರೆ ಈಗ ನನ್ನ ಭಾವನೆಗಳಿಗೆ ಹೊಸರೂಪವನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇನೆ. ಕನ್ನಡ ಬರವಣಿಗೆಯಲ್ಲಿ ಅಂಬೆಗಾಲನ್ನು ಇಡುತ್ತಿರುವ ನನ್ನ ಮೊದಲ ಪ್ರಯತ್ನ ಇದು. ಇದು ಕನ್ನಡ ಬರವಣಿಗೆಯಲ್ಲಿ ನನ್ನ ಆರಂಭ....ನನ್ನ ಮೊದಲ ಹೆಜ್ಜೆಗಳು. ನಾನು ಹಲವಾರು ಕಥೆಗಳನ್ನೂ, ಭಾವನೆಗಳನ್ನೂ ನಿಮ್ಮೂಂದಿಗೆ ಹಂಚಿಕೊಳ್ಳುತ್ತೇನೆ. ಸ್ನೇಹಿತರೇ, ನನ್ನ ಪ್ರಯತ್ನಕ್ಕೆ ಬೆಂಬಲ ನೀಡುತ್ತೀರಿ ತಾನೆ?

4 comments:

I like the words you used in kannada.Its so touchy and i would like you to please continue posting in kannada.

 

ದನ್ಯವಾದಗಳು. ಖಂಡಿತ ನಿಮ್ಮಂತವರ ಬೆಂಬಲವಿದ್ದರೆ ನಾನು ಮುಂದುವರಿಯಬಲ್ಲೆ. ಮತ್ತೆ ಭೇಟಿ ನೀಡಿ.

ಲಕ್ಷ್ಮಿ

 

Lakshmi: While writing in Kanada please write at least something about it in English so that we your non-Kanadian friends also enjoy. Unfortunately i do not have a Kandian friend who may read it for me.
I wrote two blogs Please visit my site. Your comments are very much valuable.

 

Nimma prayathnagalige naanu bembalanidutthene.Nimage shubha koruva Abhirama, email:abhiram.ks10@gmail.com.